ಬೆಂಗಳೂರು: ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದವರ ಮನೆಗಳನ್ನು ಗುರುತುಮಾಡಿಕೊಳ್ಳಲಾಗುತ್ತಿದೆ ಅಂತ ಕೆಲವೇ ದಿನಗಳ ಹಿಂದೆ ಮಾಜಿ ಸಿಎಂ ಹೆಚ್‌ ಡಿ ಕುಮಾರ ಸ್ವಾಮಿಯವರು ಹೇಳಿದ್ದ ಮಾತಿಗೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.‌ ಡಿ ಕುಮಾರಸ್ವಾಮಿಯವ್ರು, ರಾಮ ಮಂದಿರ ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆ ಇಲ್ಲದಂತಾಗಿದೆ. ಇಲ್ಲಿಯವರೆಗೆ ಇದ್ರ ಬಗ್ಗೆ ಯಾರಾದ್ರು ಲೆಕ್ಕ ಕೊಟ್ಟಿದ್ದಾರಾ? ದೇಣಿಗೆ ಸಂಗ್ರಹಿಸೋದಕ್ಕೆ ಯಾರಾದ್ರು ಲೈಸನ್ಸ್‌ ಕೊಟ್ಟಿದ್ದಾರೆ? ದೇಣಿಗೆ ಸಂಗ್ರಹಿಸುವುದಕ್ಕೆ ಸರ್ಕಾರ ಏನಾದ್ರು ಅನುಮತಿ ಕೊಟ್ಟಿದ್ಯಾ? ಎಂದು ಪ್ರಶ್ನಿಸಿದ್ರು

ಇನ್ನು ನನ್ನ ಮನೆ ಹತ್ತಿರಕ್ಕೂ ದಿನನಿತ್ಯ ಮೂರು ತಂಡಗಳು ದೇಣಿಗೆ ಸಂಗ್ರಹಕ್ಕೆ ಬರ್ತಿವೆ. ಲೈಸನ್ಸ್‌ ಇದ್ಯಾ ಅಂತಾ ಪ್ರಶ್ನಿಸಿದ್ರೆ, ಇದು ದೇಶದ ಪ್ರತೀಕ ಹಣ ನೀಡಿ ಎನ್ನುತ್ತಾರೆ. ಬೆದರಿಕೆ ಹಾಕ್ತಾರೆ. ದೇಣಿಗೆ ಸಂಗ್ರಹಿಸುವವರ ಮಾತು ಕೇಳಿದ್ರೆ ಭಯ ಆಗುತ್ತೆ. ನನ್ನ ಕಥೆಯೇ ಈ ರೀತಿಯಾದ್ರೆ ಇನ್ನೂ ಜನ ಸಾಮಾನ್ಯರ ಕಥೆಯೇನು, ಇನ್ನು ರಾಮ ಮಂದಿರ ನಿರ್ಮಾಣಕ್ಕೆ ನನ್ನ ವಿರೋಧವೇನಿಲ್ಲ. ಆದ್ರೆ, ಇದ್ರಲ್ಲಿ ಪಾರದರ್ಶಕತೆಯನ್ನ ಕಾಪಾಡಿ. ರೈಟ್‌ ಪರ್ಸನ್‌ ಬಂದು ದೇಣಿಗೆ ಕೇಳಿದ್ರೆ ನಾನು ಕೂಡ ದೇಣಿಗೆ ನೀಡ್ತೇನೆ. ಒಂದಲ್ಲ ಎರಡು ಬಾರೀ ದೇಣಿಗೆ ಕೊಡ್ತೇನೆ ಎಂದರು.

ಇನ್ನು ಪಾರದರ್ಶಕತೆ ಬಗ್ಗೆ ಮಾಡತಾಡಿದ್ರೆ, ದೇವೇಗೌಡ ಕುಟುಂಬಕ್ಕೆ ನಾಚಿಕೆಯಾಗ್ಬೇಕು. ರಾಮನ ಹೆಸ್ರನ್ನ ರಾಜಕಾರಣಕ್ಕೆ ಬಳಸಿಕೊಳ್ತಾರೆ ಎನ್ನುತ್ತಿದ್ದಾರೆ. ಆದ್ರೆ, ನ್ಯಾಯಯುತವಾಗಿ ಮಾತನಾಡಲು ಯಾಕೆ ನಾಚಿಕೆ ಆಗ್ಬೇಕು. ನಾನು ದೇಶ ರಕ್ಷಣೆ ಮಾಡ್ತೇನೆ ಎಂದು ಜಾಗಟೆ ಹೊಡೆಯೋಲ್ಲ. ನನ್ನ ಜವಾಬ್ದಾರಿಯನ್ನ ನಾನು ನಿಭಾಯಿಸುತ್ತಿದ್ದೇನೆ. ದೇಶದಲ್ಲಿ ಮುಕ್ತವಾಗಿ ಮಾತನಾಡುವ ಸ್ವಾತಂತ್ರವೂ ಇಲ್ಲ. ದೇಶದಲ್ಲಿ ಮಾಧ್ಯಮಗಳಿಗೂ ಸ್ವಾತಂತ್ರ್ಯವಿಲ್ಲ. ದೇಶದಲ್ಲಿ ಇಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದರು. ಈಗ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ರು.

Share.

1 Comment

Leave A Reply