ಧಾರವಾಡ: ತಾಲ್ಲೂಕಿನ ಇಟಿಗಟ್ಟಿ ಬಳಿ ಶುಕ್ರವಾರ ನಸುಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದಾರೆ.

ಟೆಂಪೋ ಹಾಗೂ ಲಾರಿಯ ನಡುವೆ ಅಪಘಾತ ಸಂಭವಿಸಿದ್ದು, ಮೃತದೇಹಗಳು ಇನ್ನು ವಾಹನದಲ್ಲಿ ಸಿಲುಕಿಕೊಂಡಿವೆ. ತೀವ್ರವಾಗಿ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ
ರಸ್ತೆ ದುರಂತದಲ್ಲಿ ಸಾವನ್ನಪ್ಪಿದ ಬಹುತೇಕರು ದಾವಣಗೆರೆ ನಗರದ ವಿದ್ಯಾನಗರ, ಎಂಸಿಸಿ (ಎ) ಬ್ಲಾಕ್ ಮತ್ತು ಎಂಸಿಸಿ (ಬಿ) ಬ್ಲಾಕ್ ನಿವಾಸಿಗಳು ಎಂದು ತಿಳಿದು ಬಂದಿದೆ. ಕ್ರೇನ್ ಸಹಾಯದಿಂದ ಮಗುಚಿದ ವಾಹನವನ್ನು ಎತ್ತಿಡಲಾಗಿದೆ. ಒಳಗೆ ಸಿಲುಕಿರುವ ಮೃತದೇಹ ಪೊಲೀಸರು ಹೊರಕ್ಕೆ ಎಗೆಯುವ ಪ್ರಕ್ರಿಯೆ ನೆಡೆಸಿದ್ದಾರೆ.
ಬೆಳಗಿನ ಜಾವ ಮೂರು ಗಂಟೆಗೆ ದಾವಣಗೆರೆಯಿಂದ ಹೊರಟಿದ್ದ ಟೆಂಪೋ ಧಾರವಾಡದ ಸಮೀಪ ಬಂದಾಗ ಈ ಅಪಘಾತ ನಡೆದಿದೆ.