ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣರ ಬಗ್ಗೆ ವಿವಾದಾತ್ಮಕ ದೃಶ್ಯಗಳು ಇದ್ದ ಹಿನ್ನೆಲೆಯಲ್ಲಿ ಚಿತ್ರತಂಡಕ್ಕೆ ಪೇಜಾವರ ಮಠದ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.

ಚಲನಚಿತ್ರ ಮತ್ತು ಕಿರುತೆರೆಯ ಮೂಲಕ ಯಾವುದೇ ಒಂದು ಸಮುದಾಯದ ಅವಹೇಳನವಾಗಲಿ, ನಿಂದನೆಯಾಗಲಿ ಮಾಡುವುದು ಸರಿಯಲ್ಲ. ಆ ತರಹ ಚಿತ್ರೀಕರಿಸುವುದು ಚಲನಚಿತ್ರ ವಾಣಿಜ್ಯ ಮಂಡಳಿಯ ನೀತಿಯೂ ಅಲ್ಲ, ಒಂದು ಸಮಾಜವನ್ನು ಕೆಣಕಿ, ಹಳಿದು, ಯಾರೂ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ. ಅವಹೇಳನ ಮಾಡುವ ಕೃತ್ಯ ಇಲ್ಲಿಗೆ ಕೊನೆಯಾಗಲಿ. ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸವನ್ನು ಯಾರೂ ಮಾಡಬೇಡಿ ಎಂದು ಪೇಜಾವರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಬ್ರಾಹ್ಮಣ ಸಮುದಾಯದ ಅವಹೇಳನಕಾರಿ ದೃಶ್ಯ ಚಿತ್ರೀಕರಿಸಿದ್ದಕ್ಕೆ ಸಂಬಂಧಿಸಿದಂತೆ ಬ್ರಾಹ್ಮಣ ಸಮುದಾಯದವರು ಆವೇಶಕ್ಕೆ ಒಳಗಾಗಿ ಶಾಂತಿ ಕದಡುವ ಕಾರ್ಯದಲ್ಲಿ ಪ್ರವೃತ್ತರಾಗಬಾದು’, ಚಲನಚಿತ್ರ ವಾಣಿಜ್ಯ ಮಂಡಳಿಯ ಮುಖ್ಯಸ್ಥರನ್ನು ನಾವು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಕ್ಷಮೆ ಯಾಚಿಸಿದ್ದಾರೆ. ಆಕ್ಷೇಪಾರ್ಹ ಭಾಗವನ್ನು ರದ್ದು ಪಡಿಸುವುದಾಗಿ ಭರವಸೆಯನ್ನು ನೀಡಿರುತ್ತಾರೆ’ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮಿ ತಿಳಿಸಿದ್ದಾರೆ.

‘ಪೊಗರು ಚಿತ್ರದಲ್ಲಿ ಅರ್ಚಕರ ಮೇಲೆ ಕಾಲಿಟ್ಟು ಅವರನ್ನು ಅವಮಾನಿಸಲಾಗಿದೆ. ಇದರಿಂದ ಬ್ರಾಹ್ಮಣ ಸಮಾಜಕ್ಕೆ ನೋವು ಉಂಟಾಗಿದೆ. ಇದು ಹಿಂದೂ ಧರ್ಮಕ್ಕೆ ಮಾಡಿದ ಅಪಮಾನ’,’ತಲೆ ಮೇಲೆ ಕಾಲಿಡುವ ದೃಶ್ಯಗಳಲ್ಲದೆ, ದೇವಸ್ಥಾನಕ್ಕೆ ಮಡಿ ನೀರು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಮತ್ತು ಹೋಮ-ಹವನಗಳ ಕುಂಡಲಗಳನ್ನು ಧ್ವಂಸಗೊಳಿಸುವ ದೃಶ್ಯಗಳು ನೋವುಂಟು ಮಾಡುತ್ತವೆ’ ಚಿತ್ರದ ನಿರ್ದೇಶಕರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಬ್ರಾಹ್ಮಣ ಸಮಾಜದ ಮುಖಂಡ ಪ್ರಲ್ಹಾದ್‌ ರಾವ್ ಹೇರೂರು ಒತ್ತಾಯಿಸಿದ್ದಾರೆ.

ಚಿತ್ರದಲ್ಲಿ ಬ್ರಾಹ್ಮಣರ ಬಗ್ಗೆ ವಿವಾದಾತ್ಮಕ ದೃಶ್ಯಗಳಿದ್ದ ಬಗ್ಗೆ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಚಿತ್ರದ ನಿರ್ದೇಶಕ ನಂದ ಕಿಶೋರ್ ಕ್ಷಮೆಯಾಚಿಸಿದ್ದು, ವಿವಾದಿತ ದೃಶ್ಯಗಳಿಗೆ ಕತ್ತರಿ ಹಾಕುವುದಾಗಿ ತಿಳಿಸಿದ್ದಾರೆ.

Share.

2 Comments

  1. Today, I went to the beachfront with my children. I found a sea shell and gave it to my 4 year old daughter and said “You can hear the ocean if you put this to your ear.” She placed the shell to her ear and screamed. There was a hermit crab inside and it pinched her ear. She never wants to go back! LoL I know this is entirely off topic but I had to tell someone!

Leave A Reply