ಬೆಂಗಳೂರು: ಆರ್.ವಿ ರಸ್ತೆ ಹಾಗೂ ಬೊಮ್ಮಸಂದ್ರ ಮಾರ್ಗದಲ್ಲಿರುವ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಇದೀಗ ಎರಡನೇ ಕಂತಿನಲ್ಲಿ ಮೂವತ್ತು ಕೋಟಿ ರೂಪಾಯಿ ಮೊತ್ತದ ಚೆಕ್ ಅನ್ನು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಬಿಎಂಆರ್‌ಸಿಎಲ್‍ಗೆ ಹಸ್ತಾಂತರಿಸಿದ್ದಾರೆ.

ಈ ಹಿಂದೆಯೇ ಬೆಂಗಳೂರಿನ ಮೆಟ್ರೋ ಯೋಜನೆಯ ನಿಲ್ದಾಣವೊಂದಕ್ಕೆ 100 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡುವುದಾಗಿ ಕಳೆದ ವರ್ಷ ಸುಧಾಮೂರ್ತಿ ಅವರು ಘೋಷಿಸಿದ್ದರು. ಈ ನಿಟ್ಟಿನಲ್ಲಿ ಅವರು ಎರಡನೇ ಕಂತಿನಲ್ಲಿ ಮೂವತ್ತು ಕೋಟಿ ರೂಪಾಯಿ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದ್ದಾರೆ. ಈ ಹಿಂದೆ ಅವರು ಹತ್ತು ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದರು.

100 ಕೋಟಿ ದೇಣಿಗೆ ನೀಡುವುದಷ್ಟೇ ಅಲ್ಲದೆ ಮುಂದಿನ ಮೂವತ್ತು ವರ್ಷಗಳ ಕಾಲ ನಿಲ್ದಾಣದ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯನ್ನು ಇನ್ಫೋಸಿಸ್ ಪ್ರತಿಷ್ಠಾನ ವಹಿಸಿಕೊಂಡಿದೆ. ಒಪ್ಪಂದದ ಪ್ರಕಾರ ನಿಲ್ದಾಣದ ಸಿವಿಲ್ ಕಾಮಗಾರಿ ಪೂರ್ಣಗೊಂಡ ನಂತರ ಮೂವತ್ತು ಕೋಟಿ ರೂ. ಮತ್ತು ನಿಲ್ದಾಣದ ಕಾಮಗಾರಿ ಪೂರ್ಣಗೊಂಡ ನಂತರ 30 ಕೋಟಿ ರೂ. ಇನ್ಫೋಸಿಸ್ ಪ್ರತಿಷ್ಠಾನ ನೀಡುವುದಾಗಿ ತಿಳಿಸಿದೆ.

ಸದ್ಯ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಅವರು ಮೆಟ್ರೋ ಯೋಜನೆಗೆ ಕೈಜೋಡಿಸಿದ್ದು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

Share.

5 Comments

Leave A Reply