ಬೆಂಗಳೂರು: ಸ್ಯಾಂಡಲ್’ವುಡ್ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಥಿಯೇಟರ್ ಸಂಪೂರ್ಣ ಭರ್ತಿಗೆ ಅವಕಾಶ ನೀಡಲು ಒಪ್ಪಿಗೆ ಸೂಚಿಸಿದೆ.
ನಿನ್ನೆ ರಾಜ್ಯ ಸರ್ಕಾರ ಥಿಯೇಟರ್ ಈ ಹಿಂದೆ ನೀಡಿದ್ದ 50ರಷ್ಟು ಆಸನ ಭರ್ತಿಗೆ ನೀಡಿದ್ದ ಅವಕಾಶವನ್ನೇ ಮುಂದುವರೆಸುವುದಾಗಿ ಆದೇಶಿಸಿತ್ತು. ಈ ಆದೇಶದ ವಿರುದ್ಧ ಇಂದು ಸ್ಯಾಂಡಲ್’ವುಡ್ ತಾರೆಯರು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಸಭೆ-ಸಮಾರಂಭ, ಮಾರುಕಟ್ಟೆ, ಬಸ್ ಗಳಲ್ಲಿನ ಜನದಟ್ಟನೆಗೆ ಅಂಕುಶ ಹಾಕದೆ ಬರೀ ಥಿಯೇಟರ್ ಗಳ ಮೇಲೆ ಯಾಕೆ ಎಂದು ಪ್ರಶ್ನಿಸಿದ್ದರು.
ಈ ಸಂಬಂಧ ಇಂದು ಮಾತನಾಡಿದ ಸಚಿವ ಸುಧಾಕರ್, ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಒಪ್ಪಿಗೆ ನೀಡಲಾಗಿದೆ. ಸುಮಾರು 1 ಲಕ್ಷ ಮಂದಿ ಚಿತ್ರರಂಗದ ಮೇಲೆ ಅವಲಂಬಿತರಾಗಿದ್ದಾರೆ. ಚಿತ್ರರಂಗದ ಬೇಡಿಕೆ ಮೇರೆಗೆ ಮುಂದಿನ ನಾಲ್ಕು ವಾರಗಳ ಅವಧಿಗೆ ಸಂಪೂರ್ಣ ಆಸನ ಭರ್ತಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದರು.
2 Comments
Absolutely indited content material, thankyou for entropy.
The effect is good, beautiful