ಬೆಂಗಳೂರು: ವಿವಾಹ ಮಾಡಿಕೊಳ್ಳುವವರೇ ಹುಷಾರ್.! ಇನ್ಮೇಲೆ ಮದ್ವೆಗೆ ಮಾರ್ಷಲ್ಸ್ ಗಳು ಎಂಟ್ರಿ ಕೊಡಲಿದ್ದಾರೆ. ಪ್ರತಿ ವಿವಾಹ ಕಾರ್ಯಕ್ರಮಕ್ಕೂ ಓರ್ವ ಮಾರ್ಷಲ್ ನೇಮಕ ಮಾಡಲಾಗುತ್ತಿದೆ. ಮಾಸ್ಕಾ ಹಾಕಿದ್ದಾರಾ ಇಲ್ವಾ ಅನ್ನೋದು ಪತ್ತೆ ಹಚ್ಚಲಾಗುತ್ತದೆ. ಸ್ಥಳದಲ್ಲೇ ಮಾಸ್ಕ್ ಗೆ ದಂಡ ವಸೂಲಿ ಮಾಡಲಾಗುತ್ತೆದೆ. ಮದ್ವೆ ಆಯೋಜಕರ ಮೇಲೂ ದಂಡವನ್ನು ವಿಧಿಸಲಾಗುತ್ತದೆ.
ಈ ಕುರಿತಂತೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ರಾಜ್ಯದಲ್ಲಿ ಸಭೆ, ಸಮಾರಂಭ, ಸಮಾವೇಶದಲ್ಲಿ ಹೆಚ್ಚಿನ ಜನರು ಸೇರುತ್ತಾ ಇದ್ದಾರೆ. ಹೀಗಾಗಿ ಮುಂಜಾಗ್ರತೆ ತೆಗೆದುಕೊಳ್ಳಲೇಬೇಕು. ಮಾರ್ಗಸೂಚಿಗೆ ವಿರುದ್ಧವಾಗಿ ನಡೆಯುತ್ತಿವೆ. ಮದುವೆ ಸಮಾರಂಭಗಳು ಹಾಗೆ ನಡೆಯುತ್ತಿವೆ. ಮಾಸ್ಕ್ ಹಾಕುವುದನ್ನೇ ಬಿಟ್ಟಿದ್ದಾರೆ. ಜನ, ವಿಐಪಿ, ವಿವಿಐಪಿಗಳು ಹಾಕ್ತಿಲ್ಲ. ಇದು ನಿಜಕ್ಕೂ ಅಪಾಯಕಾರಿ. ಹೀಗಾಗಿ ಮದುವೆ ಸಮಾರಂಭಕ್ಕೆ ಮಾರ್ಷಲ್ ಹಾಕ್ತೇವೆ. ಇಂದು ಅಧಿಕೃತ ಸುತ್ತೋಲೆ ಹೊರಡಿಸ್ತೇವೆ. ಫುಡ್ ಮಾಡುವವರು, ಹಂಚುವವರ ಮೇಲೆ ನಿಗಾ ವಹಿಸಲಾಗುತ್ತದೆ. ಇವರೆಲ್ಲರಿಗೆ ಕೊರೋನಾ ಟೆಸ್ಟ್ ಕಡ್ಡಾಯ ಮಾಡ್ತೇವೆ ಎಂಬುದಾಗಿ ಆ ತಿಳಿಸಿದ್ದಾರೆ.
ಈ ಕುರಿತಂತೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಡಿಸಿ, ಎಸ್ಪಿ, ಸಿಇಒ, ಆರೋಗ್ಯಾಧಿಕಾರಿಗಳ ಜೊತೆಗೆ ವಿಡಿಯೋ ಸಂವಾದವನ್ನ ಮಾಡಿದ್ದೇವೆ. ಕೇರಳ, ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಾಗ್ತಿದೆ. ಹೀಗಾಗಿ ಗಡಿಯಲ್ಲಿ ಮತ್ತಷ್ಟು ನಿಗಾವಹಿಸಿದ್ದೇವೆ. ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆಯೇ.? ಯಾವ ರೀತಿ ಟೆಸ್ಟ್ ನಡೆದಿದೆ, ಪ್ರಮಾಣ ಇದರ ಚರ್ಚೆಯಾಗಿದೆ ಎಂದರು.
2 Comments
The wig is very natural, mainly because it has a small face
After study a few of the blog posts on your website now, and I truly like your way of blogging. I bookmarked it to my bookmark website list and will be checking back soon. Pls check out my web site as well and let me know what you think.