ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟನಾಗಿ ಮಿಂಚಿದ್ದ ‘ಮಧುಮಗ’ ಖ್ಯಾತಿಯ ಮೋಹನ್ ಜುನೇಜಾ ಇಂದು ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಮೋಹನ್ ಅವರು ಕೆಲವು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಬೆಂಗಳೂರಿನ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಇಂದು (ಮೇ 7) ವಿಧಿವಶರಾಗಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ ಚೆಲ್ಲಾಟದಲ್ಲಿನ ಪಾತ್ರದಿಂದ ಮೋಹನ್ ‘ಮಧುಮಗ’ ಎಂದೇ ಖ್ಯಾತರಾಗಿದ್ದರು. ನವಗ್ರಹ, ಕೆಜಿಎಫ್, ಗಣೇಶನ ಗಲಾಟೆ ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಮೋಹನ್ ಅಭಿನಯಿಸಿದ್ದಾರೆ.