ಮೆಲ್ಬೋರ್ನ್‌: ವಿಶ್ವದ ನಂ.1 ಟೆನಿಸ್‌ ಆಟಗಾರ ನೊವಾಕ್ ಜೊಕೊವಿಕ್‌ ಫೈನಲ್‌ ಹಣಾಹಣಿಯಲ್ಲಿ ರಷ್ಯಾದ ಡೆನಿಲ್‌ ಮೆಡ್ವೆಡೆವ್‌ ಅವರ ವಿರುದ್ಧ 7-5, 6-2, 6-2 ಅಂತರದಲ್ಲಿ ಗೆದ್ದು ವೃತ್ತಿ ಜೀವನದ 9ನೇ ಆಸ್ಟ್ರೇಲಿಯನ್‌ ಓಪನ್‌ ಮುಡಿಗೇರಿಸಿಕೊಂಡರು.

ಟೂರ್ನಿಯುದ್ದಕ್ಕೂ ಅದ್ಭುತ ಫಾರ್ಮ್‌ನಲ್ಲಿ ಮುಂದುವರಿದಿದ್ದ ಸರ್ಬಿಯಾ ಆಟಗಾರ ವೃತ್ತಿ ಜೀವನದ 18ನೇ ಗ್ರ್ಯಾನ್‌ ಸ್ಲ್ಯಾಮ್‌ ಗೆಲ್ಲಲು ಹಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಆರಂಭಿಕ ಸೆಟ್‌ನಲ್ಲಿ ಸಮಬಲ ಹೋರಾಟ ನಡೆಸಿದ್ದ ಈ ಇಬ್ಬರೂ 5-5 ಸಮಬಲ ಸಾಧಿಸಿದ್ದರು. ಆದರೆ, ಕ್ಲಾಸ್‌ ಆಟ ಪ್ರದರ್ಶಿಸಿದ ಜೊಕೊವಿಕ್‌ 42 ನಿಮಿಷಗಳ ಅವಧಿಯ ಹೋರಾಟದಲ್ಲಿ ಮೊದಲ ಸೆಟ್‌ ತನ್ನದಾಗಿಸಿಕೊಂಡರು.

ಎರಡನೇ ಸೆಟ್‌ನಲ್ಲಿ ಹೆಚ್ಚು ಪರಿಶ್ರಮ ಪಡದ ಜೊಕೊವಿಕ್‌, ಸುಲಭವಾಗಿ 6-2 ಅಂತರದಲ್ಲಿ ಗೆದ್ದರು. ನಂತರ, ಎರಡೂ ಹಾಗೂ ಮೂರನೇ ಸೆಟ್‌ಗಳನ್ನು ಗೆಲ್ಲಲು ಜೊಕೊವಿಚ್‌ಗೆ ಹೆಚ್ಚು ಕಷ್ಟವಾಗಲಿಲ್ಲ. ತೀವ್ರ ಕುತೂಹಲ ಕೆರಳಿಸಿದ ಮೂರನೇ ಸೆಟ್‌ನಲ್ಲಿಯೂ ವಿಶ್ವದ ನಂ. 1 ಆಟಗಾರ ಅಷ್ಟೇ ಅಂತರದಲ್ಲಿ ಗೆದ್ದು 9ನೇ ಆಸ್ಟ್ರೇಲಿಯಾ ಓಪನ್‌ಗೆ ಭಾಜನರಾದರು.

Share.

2 Comments

Leave A Reply