ಕರಾಚಿಯ ಸ್ಥಳೀಯ ಕ್ಲಬ್‌ನಲ್ಲಿ ಶನಿವಾರ ಪಾಕಿಸ್ತಾನ ಬಾಕ್ಸಿಂಗ್ ಕೌನ್ಸಿಲ್ ಆಯೋಜಿಸಿದ್ದ ‘ಫೈಟ್ ನೈಟ್ ಸರಣಿ’ ಯ ಸಂದರ್ಭದಲ್ಲಿ ಮುಖಕ್ಕೆ ಹೊಡೆತ ಬಿದ್ದ ಪರಿಣಾಮ ಬಾಕ್ಸರ್ ಮೊಹಮ್ಮದ್ ಅಸ್ಲಂ ಸಾವನ್ನಪ್ಪಿದ್ದಾರೆ.

33 ವರ್ಷದ ಈ ಬಾಕ್ಸರ್ ಪಂದ್ಯವೊಂದರಲ್ಲಿ ಪ್ರತಿಸ್ಪರ್ಧಿ ಮುಹಮ್ಮದ್ ವಾಲಿ ವಿರುದ್ಧ ಹೋರಾಡುತ್ತಿದ್ರು. ಈ ವೇಳೆ ಬಾಕ್ಸರ್ ಮುಖಕ್ಕೆ ಹೊಡೆದಿದ್ದು, ನಂತ್ರ ಅವರು ನೆಲಕ್ಕೆ ಬಿದ್ದರು. ಅಮೇಲೆ ಆಸ್ಪತ್ರೆಗೆ ಸೇರಿಸಲಾಯಿತಾದ್ರು ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸಧ್ಯ ಈ ಪಂದ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೊಡೆತದ ನಂತರ ಮೊಹಮ್ಮದ್ ಅಸ್ಲಾಮ್ ಪ್ರಜ್ಞೆ ತಪ್ಪಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಅಸ್ಲಂನನ್ನ ತಕ್ಷಣವೇ ಸ್ಟೇಡಿಯಂ ರಸ್ತೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಅಲ್ಲಿ ಅವರನ್ನ ಐಸಿಯುಗೆ ಸ್ಥಳಾಂತರಿಸಲಾಯಿತು. ಆದ್ರೆ, ಅವರು ಭಾನುವಾರ ಮಧ್ಯಾಹ್ನ ನಿಧನರಾದರು.

ಪಾಕಿಸ್ತಾನ ಬಾಕ್ಸಿಂಗ್ ಫೆಡರೇಶನ್ ಈ ಘಟನೆಯನ್ನ ಖಂಡಿಸಿದ್ದು, ಸಂಘಟಕರ ವಿರುದ್ಧ ದೂರ ದಾಖಲಾಗಿದೆ. ಇದರೊಂದಿಗೆ, ಈ ಘಟನೆಯನ್ನ ಕಾನೂನುಬಾಹಿರ ಎಂದು ಕರೆಯಲಾಗುತ್ತದೆ.

Share.

5 Comments

  1. An attention-grabbing discussion is price comment. I think that you need to write more on this topic, it may not be a taboo topic however typically individuals are not enough to talk on such topics. To the next. Cheers

  2. I’m really inspired with your writing talents and also with the layout in your weblog. Is that this a paid theme or did you customize it your self? Anyway stay up the nice quality writing, it is uncommon to look a great blog like this one these days..

Leave A Reply