ಮುಂಬೈ: ಐಪಿಎಲ್ ಆರಂಭಕ್ಕೂ ಮುನ್ನ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಚೆನ್ನೈ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದು, ರವೀಂದ್ರ ಜಡೇಜಾ ಅವರು ನೂತನ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಈ ಬಗ್ಗೆ ಸಿಎಸ್‍ಕೆ ತಮ್ಮ ಅಧಿಕೃತ ಟ್ವಟ್ಟರ್ ಖಾತೆಯಲ್ಲಿ ತಿಳಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್‌ನ ಎಂ.ಎಸ್. ಧೋನಿ ನಾಯಕತ್ವವನ್ನು ತೊರೆದಿದ್ದು, ರವೀಂದ್ರ ಜಡೆಜಾ ಅವರು ನೂತನವಾಗಿ ನಾಯಕರಾಗಿದ್ದಾರೆ ಎಂದು ತಿಳಿಸಿದೆ.

2012 ರಿಂದ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಆಡುತ್ತಿರುವ ಜಡೇಜಾ ಅವರು, ಸಿಎಸ್‍ಕೆಯನ್ನು ಮುನ್ನಡೆಸುವ ಮೂರನೇ ಆಟಗಾರನಾಗಲಿದ್ದಾರೆ. ಧೋನಿ ಈ ಟೂರ್ನಿಯಲ್ಲಿ ತಂಡದ ಆಟಗಾರನಾಗಿ ಮುಂದುವರೆಯಲಿದ್ದಾರೆ.
ಐಪಿಎಲ್ 2022ರ ಆರಂಭಿಕ ಪಂದ್ಯವು ಸಿಎಸ್‍ಕೆ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಧೋನಿ ನಾಯಕತ್ವದಲ್ಲಿ ಸಿಎಸ್‍ಕೆ ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿತ್ತು.
3 Comments
Be careful with that butter knife.
dark market bitcoin dark web
This article will help the internet people for creating new website or even a blog from
start to end.