ಲಂಡನ್: ಕ್ರಿಕೆಟ್ ಆಸ್ಟ್ರೇಲಿಯಾ ದಶಕದ ಟೆಸ್ಟ್ ತಂಡದ ನಾಯಕ ಗೌರವಕ್ಕೆ ಪಾತ್ರರಾಗಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ದಶಕದ ವಿಸ್ಡನ್ ಐದು ಕ್ರಿಕೆಟಿಗರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ “ವಿಸ್ಡನ್ ದಶಕದ ಕ್ರಿಕೆಟಿಗ’ ಗೌರವಕ್ಕೆ ಪಾತ್ರರಾಗಿದ್ದಾರೆ. ಕೊಹ್ಲಿ ಹೊರತಾಗಿ ವಿಸ್ಡನ್ ಪಟ್ಟಿಯಲ್ಲಿ ಡೇಲ್ ಸ್ಟೇನ್, ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿ, ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್ ಹಾಗೂ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಲಿಸೆ ಪೆರ್ರಿ ಸೇರಿದಂತೆ ಒಟ್ಟಾರೆ ಐವರಿಗೆ ಈ ಗೌರವ ಒಲಿದು ಬಂದಿದೆ.
ಕೊಹ್ಲಿ ಕಳೆದ 10 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5,775ಕ್ಕೂ ಹೆಚ್ಚು ರನ್ ಬಾರಿಸಿ ದ್ದಾರೆ. ಹಲವಾರು ದಾಖಲೆಗಳನ್ನು ಬರೆದಿರುವುದರಿಂದ ಅವರಿಗೆ ಈ ಗೌರವ ನೀಡಲಾಗಿದೆ ಎಂದು ವಿಸ್ಡನ್ ತಿಳಿಸಿದೆ.
2014 ರಲ್ಲಿ ಇಂಗ್ಲೆಂಡ್ ಪ್ರವಾಸದ ಅಂತ್ಯ ಮತ್ತು ನವೆಂಬರ್‌ನಲ್ಲಿ ಕೋಲ್ಕತ್ತಾದಲ್ಲಿ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ನಡುವೆ, ಕೊಹ್ಲಿ 63 ಸರಾಸರಿಯಲ್ಲಿ 21 ಶತಕ ಮತ್ತು 13 ಅರ್ಧಶತಕಗಳನ್ನು ಸಿಡಿಸಿದ್ದಾರೆ.
2019ರ ಆವೃತ್ತಿಯಲ್ಲಿ ಕೊಹ್ಲಿ ಎಲ್ಲ ಮಾದರಿಯಿಂದ 64.05 ಸರಾಸರಿಯಲ್ಲಿ 2,370ರನ್ ಗಳಿಸಿದ್ದಾರೆ. 31ರ ಪ್ರಾಯದ ಬಲಗೈ ಬ್ಯಾಟ್ಸ್‌ಮನ್ ಸತತ ನಾಲ್ಕನೇ ಬಾರಿ ವರ್ಷದಲ್ಲಿ 2,000 ರನ್ ಗೂ ಅಧಿಕ ರನ್ ಕಲೆಹಾಕಿದ್ದಾರೆ.