• ಮುಖಪುಟ
  • ಕರಾವಳಿ
    • ದಕ್ಷಿಣ ಕನ್ನಡ
    • ಉಡುಪಿ
    • ಕಾಸರಗೋಡು
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    • ಆರೋಗ್ಯ
    • ಪಾಕ ಶಾಲೆ
    • ಕಲಾಭೂಮಿಕೆ
    • ವಿಶೇಷ ಅಂಕಣ
    • ಸ್ಟೂಡೆಂಟ್ಸ್ ಗ್ಯಾಲರಿ
    • ತುಳು ಚಾವಡಿ
  • ಗ್ಯಾಲರಿ
Facebook Twitter Instagram
  • Advertising
  • Careers
  • Contact Us
Facebook Twitter LinkedIn Pinterest RSS
CitizenLive News
  • ಮುಖಪುಟ
  • ಕರಾವಳಿ
    1. ದಕ್ಷಿಣ ಕನ್ನಡ
    2. ಉಡುಪಿ
    3. ಕಾಸರಗೋಡು
    Featured

    ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

    By newscordinator newscordinator31/05/2020 : 7:35 PM11937
    Recent

    ಪುತ್ತೂರು: ಸಿಂಗಾಣಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

    15/08/2022 : 11:10 AM

    ಮಂಗಳೂರಲ್ಲೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ; ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

    15/08/2022 : 10:19 AM

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಾಟಿಂಗ್ ಮಾಡುತ್ತಿದ್ದ ಯುವಕ – ಯುವತಿಯ ತೀವ್ರ ತಪಾಸಣೆ

    14/08/2022 : 7:01 PM
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    1. ಆರೋಗ್ಯ
    2. ಪಾಕ ಶಾಲೆ
    3. ಕಲಾಭೂಮಿಕೆ
    4. ವಿಶೇಷ ಅಂಕಣ
    5. ಸ್ಟೂಡೆಂಟ್ಸ್ ಗ್ಯಾಲರಿ
    6. ತುಳು ಚಾವಡಿ
    Featured

    186 ವರ್ಷದ ಬಳಿಕ ಅಂತ್ಯಕ್ರಿಯೆ ನಡೆಸಲ್ಪಟ್ಟ ಮಹಿಳೆ

    By News Editor29/05/2020 : 1:09 AM8495
    Recent

    ಆ ಸಂಭ್ರಮದ ದಿನಗಳು ಇನ್ನೆಲ್ಲಿ…

    23/09/2022 : 10:11 PM

    ಅಖಂಡವಾಗಿದ್ದ ಈ ರಾಷ್ಟ್ರ ತ್ರಿಖಂಡವಾದದ್ದು ಹೇಗೆ..?

    14/08/2022 : 10:08 AM

    ಕೃಷ್ಣನ ಆಶಯದಂತೆ ಭಾರತ ಉತ್ತುಂಗಕ್ಕೆ ಏರಲಿ.. ಅಖಂಡ ಭಾರತದ ಕನಸು ನನಸಾಗಲಿ

    14/08/2022 : 9:33 AM
  • ಗ್ಯಾಲರಿ
CitizenLive News
Home » Uncategorized » ಫಲಿಸದ ಪ್ರಾರ್ಥನೆ… ಕ್ಯಾ. ವರುಣ್ ಸಿಂಗ್ ವಿಧಿವಶ
Uncategorized

ಫಲಿಸದ ಪ್ರಾರ್ಥನೆ… ಕ್ಯಾ. ವರುಣ್ ಸಿಂಗ್ ವಿಧಿವಶ

News EditorBy News Editor15/12/2021 : 1:12 PMUpdated:15/12/2021 : 1:22 PMNo Comments1 Min Read

ತಮಿಳು ನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ಪತನ ದುರಂತದಲ್ಲಿ ಬದುಕುಳಿದಿದ್ದ ಏಕೈಕ ಸೇನಾ ಅಧಿಕಾರಿ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್ ಇಂದು ನಿಧನರಾಗಿದ್ದಾರೆ.

ಡಿ. 8ರಂದು ನಡೆದ ದುರಂತದಲ್ಲಿ ಸಿಡಿಎಸ್​ ಬಿಪಿನ್​ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ 11 ಸೇನಾಧಿಕಾರಿಗಳು ಸೇರಿ 13 ಮಂದಿ ಮೃತಪಟ್ಟಿದ್ದರು. ವರುಣ್​ ಸಿಂಗ್ ಮಾತ್ರ ಬದುಕುಳಿದಿದ್ದರು. ಶೇ.45ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅವರಿಗೆ ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ ಅಂದಿನಿಂದಲೂ ಚಿಕಿತ್ಸೆ ನೀಡಲಾಗುತ್ತಿತ್ತು.

ಮೊದಲು ವೆಲ್ಲಿಂಗ್ಟನ್​ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲಾಗಿತ್ತು.

IAF is deeply saddened to inform the passing away of braveheart Group Captain Varun Singh, who succumbed this morning to the injuries sustained in the helicopter accident on 08 Dec 21. IAF offers sincere condolences and stands firmly with the bereaved family.

— Indian Air Force (@IAF_MCC) December 15, 2021

ಡಿ.8ರಂದು ತಮಿಳುನಾಡಿನ ಕೂನೂರು ಬಳಿಯ ಕಟ್ಟೇರಿ ಎಂಬ ಗುಡ್ಡಗಾಡು ಗ್ರಾಮದ ಬಳಿ ಸೇನಾ ವಿಐಪಿ ಹೆಲಿಕಾಪ್ಟರ್​ ಪತನಗೊಂಡಿತ್ತು. ಅವರು ಸೂಲೂರಿಂದ ವೆಲ್ಲಿಂಗ್ಟನ್​ಗೆ ಹೋಗುವ ಮಾರ್ಗ ಮಧ್ಯದಲ್ಲಿ ಈ ಅವಘಡ ಆಗಿತ್ತು. ಅದರಲ್ಲಿ ಭಾರತದ ಮೊದಲ ಸಿಡಿಎಸ್​ ಬಿಪಿನ್​ ರಾವತ್​ ಸೇರಿ 11 ಮಂದಿ ಸೇನಾಧಿಕಾರಿಗಳು ಇದ್ದರು. ದುರಂತದಲ್ಲಿ ಅಂದು ಮೃತಪಟ್ಟವರ ಮೃತದೇಹ ಗುರುತು ಪತ್ತೆ, ಅಂತ್ಯಸಂಸ್ಕಾರ ನಡೆದಿದೆ. ಆದರೆ ವರುಣ್​ ಸಿಂಗ್​ ಒಬ್ಬರು ಬದುಕುಳಿದಿದ್ದರು. ವರುಣ್​ ಸಿಂಗ್​ ಆರೋಗ್ಯ ಸ್ಥಿತಿ ಬಗ್ಗೆ ಈಗಲೇ ಏನೂ ಹೇಳಲಾಗದು ಎಂದು ಅವರ ಕುಟುಂಬಸ್ಥರೇ ಹೇಳಿದ್ದರು. ಆದರೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದ ಭಾರತೀಯ ವಾಯುಸೇನೆ, ವರುಣ್​ ಸಿಂಗ್ ಗಂಭೀರ ಸ್ಥಿತಿಯಲ್ಲಿಯೇ ಇದ್ದಾರೆ. ಆದರೆ ಅವರು ಗುಣಮುಖರಾಗುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿತ್ತು.

ಕಳೆದ ಆಗಸ್ಟ್ 15ರಂದು ವಿಂಗ್ ಕಮಾಂಡರ್​ ವರುಣ್ ಸಿಂಗ್ ಅವರು ಹಗುರ ಯುದ್ಧ ವಿಮಾನ (Light Combat Aircraft – LCA) ಸ್ಕ್ವಾರ್ಡನ್​ನಲ್ಲಿ ಪೈಲಟ್ ಆಗಿದ್ದರು. ಅವರಿಗೆ ಭಾರತದ ಸಶಸ್ತ್ರಪಡೆಗಳಿಗೆ ಶಾಂತಿಕಾಲದಲ್ಲಿ ನೀಡುವ ಮೂರನೇ ಅತ್ಯುನ್ನತ ಗೌರವವಾದ ಶೌರ್ಯಚಕ್ರ ನೀಡಿ ಪುರಸ್ಕರಿಸಲಾಗಿತ್ತು

Share. Facebook Twitter Pinterest LinkedIn Tumblr Email
Previous Articleಉಪ್ಪಿನಂಗಡಿಯಲ್ಲಿ ಪೊಲೀಸರ ಮೇಲೆ ದಾಳಿ; PFI ಸಂಘಟನೆಯನ್ನು ನಿಷೇಧಿಸಲು ಆಗ್ರಹ
Next Article 35 ವಿದ್ಯಾರ್ಥಿನಿಯರ ಹಾಜರಾತಿ ತೋರಿಸಿ ಸರ್ಕಾರಕ್ಕೆ ವಂಚನೆ

Related Posts

ಇಂಡೋ-ಪಾಕ್ ಪ್ರೇಮ ಕಥೆ – ಪೋಲೀಸರ ಬಲೆಗೆ ಬಿದ್ದ ಇಕ್ರಾ-ಯಾದವ್ ಜೋಡಿ!

24/01/2023 : 1:32 PM

‘ಗೌಜಿ ಗಮ್ಮತ್‌’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ – ಶೀಘ್ರದಲ್ಲೇ ಸಿನಿಮಾ ಬೆಳ್ಳಿತೆರೆಗೆ!

19/01/2023 : 10:54 PM

ಆ ಸಂಭ್ರಮದ ದಿನಗಳು ಇನ್ನೆಲ್ಲಿ…

23/09/2022 : 10:11 PM

Comments are closed.

Copyright © 2019 CitizenLive News | Designed by:
  • About
  • Privacy
  • Contact

Type above and press Enter to search. Press Esc to cancel.