ಉಡುಪಿ: ಜಿಲ್ಲೆಯಲ್ಲಿ ಆರು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹಲವು ದಿನಗಳಿಂದ ಉಡುಪಿ ಜಿಲ್ಲೆಯ ಅಲ್ಲಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಸುಮಾರು 80 ಮಿಲಿ ಮೀಟರ್ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜಿಲ್ಲೆಯ ಕಾಪು ಉಡುಪಿ ಕುಂದಾಪುರ ಮತ್ತು ಬೈಂದೂರ್ ತಾಲೂಕಿನಲ್ಲಿ ನಾಡದೋಣಿ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಳಿಸಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ 45 ರಿಂದ 60 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಅಲೆಗಳ ಪ್ರಮಾಣ ಏರಿಕೆಯಾಗಲಿದೆ. ಸಮುದ್ರ ತೀರದಲ್ಲಿ ವಾಸಿಸುವ ಮೀನುಗಾರರು ಎಚ್ಚರಿಕೆಯಿಂದ ಇರಬೇಕು. ಕಡಲತೀರದಲ್ಲಿ 2 ಮೀಟರ್ ವರೆಗೂ ಅಲೆಗಳು ಹೇಳಬಹುದು ಮೀನುಗಾರರು ಎಚ್ಚರಿಕೆಯಿಂದ ಇರಿ ಎಂದು ಸೂಚಿಸಲಾಗಿದೆ.
ಮುಂದಿನ ನಾಲ್ಕೈದು ದಿನ ಗಾಳಿ ಜೊತೆ ಮಳೆಯಾಗುವ ಮುನ್ಸೂಚನೆ ಇದೆ. ನದಿ, ಸಮುದ್ರ ತೀರದ ಜನ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಹೇಳಿದೆ. ನದಿ ಮತ್ತು ಸಮುದ್ರ ತೀರಕ್ಕೆ ಬರುವ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕು. ನೀರಿಗೆ ಇಳಿಯಬಾರದು ಎಂದು ಡಿಸಿ ಜಗದೀಶ್ ಸೂಚನೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹವಾಮಾನ ಇಲಾಖೆ ಎಚ್ಚರಿಕೆಯಂತೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕೆಲಸ ಕಾರ್ಯದ ನಿಮಿತ್ತ ಓಡಾಡುವ ಜನ ಎಚ್ಚರಿಕೆಯಿಂದ ಇರಬೇಕು. ನದೀತೀರದಲ್ಲಿ ಸಮುದ್ರ ತೀರದಲ್ಲಿ ನೀರಿನ ಮಟ್ಟ ಜಾಸ್ತಿಯಾದರೆ ತಕ್ಷಣ ಕಂಟ್ರೋಲ್ ರೂಮ್ ಸಂಪರ್ಕ ಮಾಡಬೇಕು ಎಂದು ಮಾಹಿತಿ ನೀಡಿದರು. ಜಿಲ್ಲಾಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಯಾರು ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದ್ದಾರೆ.
1 Comment
Hi, i think that i saw you visited my blog so i came to “return the favor”.I’m attempting to find things to enhance my site!I
suppose its ok to use some of your ideas!!