ಬೆಂಗಳೂರು/ಮಂಗಳೂರು: ಅದಾನಿ ಎಂಟರ್‌ಪ್ರೈಸಸ್‌ಗೆ ಮಂಗಳೂರು ವಿಮಾನ ನಿಲ್ದಾಣವನ್ನು ಗುತ್ತಿಗೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ವಿಮಾನ ನಿಲ್ದಾಣ ಗುತ್ತಿಗೆಗೆ ಸಂಬಂಧಿಸಿ ಸರ್ಕಾರದ ನೀತಿಯಲ್ಲಿ ಮಧ್ಯ ಪ್ರವೇಶಿಸಲು ನಕಾರ ವ್ಯಕ್ತಪಡಿಸಿದೆ. ಈ ಮುನ್ನ ವಿಮಾನ ನಿಲ್ದಾಣದ ನೌಕರರ ಸಂಘ ರಿಯಾಯಿತಿ ಒಪ್ಪಂದ ಪ್ರಶ್ನಿಸಿದ್ದ ಪಿಐಎಲ್ ಸಲ್ಲಿಸಿತ್ತು. ಅರ್ಜಿಯಲ್ಲಿ ವಿಮಾನ ನಿಲ್ದಾಣದ ಬಹುತೇಕ ಸೇವೆಗಳನ್ನು ಹಸ್ತಾಂತರಿಸುವುದನ್ನು ಪ್ರಶ್ನಿಸಲಾಗಿತ್ತು. ಆದರೆ ಬಿಡ್ ಆಹ್ವಾನಿಸಿಯೇ ವಿಮಾನ ನಿಲ್ದಾಣವನ್ನು ಗುತ್ತಿಗೆಗೆ ನೀಡಲಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ಸಮರ್ಥಿಸಿಕೊಂಡಿತ್ತು.